ಶತಮಾನ ಪೂರೈಸಿದ 143 ಶಾಲೆಗಳ ಅಭಿವೃದ್ಧಿಗೆ 20 ಕೋಟಿ ರೂ ಸರ್ಕಾರದ ಕ್ರಮ ಶ್ಲಾಘನೀಯ ಅನುಕರಣೀಯ
ಶತಮಾನ ಪೂರೈಸಿದ 143 ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ 20 ಕೋಟಿ ರೂಗಳನ್ನು ಬಿಡುಗಡೆ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಪ್ರೊ.ಎಂ.ಆರ್. ದೊರೆಸ್ವಾಮಿ ಮಾಜಿ ಸಲಹೆಗಾರರು, ಶಿಕ್ಷಣ ಸುಧಾರಣೆಗಳು, ಕರ್ನಾಟಕ ಸರ್ಕಾರ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಹಿಂದೆ ರಾಜ್ಯದ 8 ಜ್ಞಾನ ಪೀಠ ಪುರಸ್ಕೃತರು ಅಭ್ಯಾಸ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 16.3 ಕೋಟಿ ರೂಗಳನ್ನು ಬಿಡುಗಡೆ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ಕ್ರಮವನ್ನು ಸ್ಮರಿಸುತ್ತಾ, ಅವರ ನೇತೃತ್ವದಲ್ಲಿ ಶಾಲಾ ಅಭಿವೃದ್ಧಿ ಪರ್ವ ಅಭೂತಪೂರ್ವವಾಗಿ ಮುಂದುವರೆಯುವ ಎಲ್ಲಾ ಶುಭ ಸೂಚಕಗಳು ಗೋಚರಿಸುತ್ತಿವೆ. ಅವರಿಂದ ಮುಂದೆಯೂ ಶಾಲಾ ಶಿಕ್ಷಣದ ಉದ್ದೇಶಪೂರಕವಾದ ಕ್ರಮಗಳನ್ನು ನಿರೀಕ್ಷಿಸುವ ಭರವಸೆಯನ್ನು ಮೂಡಿಸಿದ್ದಾರೆ. ಒಟ್ಟಾರೆ ಈ ಕ್ರಮಗಳು ಇತರೆ ರಾಜ್ಯಗಳೂ ಸಹಾ ನುಕರಿಸುವಂತಹ ಮಾದರಿಯಾಗಿದ್ದು ಕರ್ನಾಟಕದ ಗರಿಮೆ.
ಪ್ರೊ.ಎಂ.ಆರ್. ದೊರೆಸ್ವಾಮಿ
- #InTheMedia
- January 18, 2022
- Viewed - 2450
- Liked - 2