ಕನ್ನಡ ರಸಪ್ರಶ್ನೆ ಸ್ಪರ್ಧೆ
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಪ್ರಯುಕ್ತ, ಕನ್ನಡ ಕೂಟದ ವಿದ್ಯಾರ್ಥಿಗಳಿಂದ 8ನೇ ಸೆಪ್ಟೆಂಬರ್ 2022 ರಂದು "ಕನ್ನಡ ರಸಪ್ರಶ್ನೆ ಸ್ಪರ್ಧೆ” ಆಚರಣೆಯನ್ನು ನಡೆಸಲಾಯಿತು.100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥರು ಡಾ. ವಿ ಕೃಷ್ಣ ರವರು, ಪ್ರದರ್ಶಕ ಕಲೆಗಳ ವಿಭಾಗದ ಅಧ್ಯಕ್ಷೆ ಡಾ. ಸುಷ್ಮಾ ರವರು ಮತ್ತು ಲ್ಯಾಂಗ್ವೇಜ್ ಸ್ಟೇಷನ್ ಸಿಇಒ ಸವಿತಾ ರೆಡ್ಡಿ ರವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗು ಕನ್ನಡ ಮತ್ತು ಅದರ ಸಾಂಸ್ಕೃತಿಕ ಮೌಲ್ಯಗಳ ಕುರಿತು ಅವರ ಭಾಷಣಗಳು ಎಲ್ಲಾ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು. ಸಿಎಸ್‌ಇ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಕನ್ನಡ. ಕೂಟದ ಸಿಬ್ಬಂದಿ ಸಲಹೆಗಾರರಾದ ವಾದಿರಾಜ್ ಆಚಾರ್ಯ ರವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ಕೆಲವು ಮಾತುಗಳನ್ನು ಆಡಿದರು. ಮತ್ತು ಕಾರ್ಯಕ್ರಮದ ಉದ್ದಕ್ಕೂ ನಮಗೆ ಬೆಂಬಲ ನೀಡಿದರು. ಅಗ್ರ 3 ತಂಡಗಳಿಗೆ ನಗದು ಬಹುಮಾನ ಮತ್ತು ಪೂಚಂತೇ ಬರೆದ ಪುಸ್ತಕಗಳನ್ನು ನೀಡಲಾಯಿತು. ಒಟ್ಟಾರೆಯಾಗಿ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯ ಅದರ ಸಂಸ್ಕೃತಿ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ಅಪಾರವಾದ ಜ್ಞಾನವನ್ನು ನೀಡಿದ ಯಶಸ್ವಿ ಕಾರ್ಯಕ್ರಮವಾಗಿದೆ.ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೆವೆ.
- #Event #Innovative
- September 10, 2022
- Viewed - 1093
- Liked - 4