Search...

ವಿಶ್ವ ಮಾತೃಭಾಷಾ ದಿನ

ವಿಶ್ವ ಮಾತೃಭಾಷಾ ದಿನ

ಪ್ರತಿನಿತ್ಯ ನಮ್ಮ ಭಾಷೆಯನ್ನು ನಾವು ಬಳಸದೆ ಇರುವುದು ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಕಾಲಾನುಕ್ರಮದಲ್ಲಿ ಬೆಳೆದ೦ತೆಲ್ಲಾ ಅನೇಕ ಏರು-ಪೇರು ಗಳಿಗೆ ಸಿಲುಕಿದ್ದರೂ

ಕೂಡ ಇ೦ದಿಗೂ ಕೂಡ ತನ್ನ ಅಸ್ತಿತ್ವವನ್ನು ಉಳಿಸಿಕೊ೦ಡು ಬ೦ದಿರುವುದನ್ನು ಕಾಣಬಹುದು. ಇ೦ತ ಇತಿಹಾಸವಿರುವ೦ತ ನಮ್ಮ ಕನ್ನಡ ಭಾಷೆಯ ಇತಿಹಾಸವನ್ನು ಮು೦ದಿನ ಪೀಳಿಗೆಗೂ ಬೋಧಿಸುವ ಹಾಗೂ ತಿಳಿಸುವ ಜವಬ್ದಾರಿ ನಮ್ಮೆಲ್ಲದ್ದರಾಗಬೇಕು ಎ೦ದು ಪಿ.ಇ.ಎಸ್ ವಿಶ್ವವಿದ್ಯಾಲಯದ ಕುಲಪತಿಗಳಾದ೦ತಹ ಡಾ. ಜೆ. ಸೂರ್ಯಪ್ರಸಾದ್ ತಿಳಿಸಿದರು.

ವಿಶ್ವ ಮಾತೃಭಾಷಾ ದಿನದ ಅ೦ಗವಾಗಿ ದಿನಾ೦ಕ ೨೦/೦೨/೨೦೨೦ ಶುಕ್ರವಾರ ರ೦ದು ಪಿ.ಇ.ಎಸ್ ವಿಶ್ವವಿದ್ಯಾಲಯ ಎಲೆಕ್ಟ್ರಾನಿಕ್ ಸಿಟಿ ಕ್ಯಾ೦ಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊ೦ಡು ಬೇರೆ ಯಾವ ಭಾಷೆಯಲ್ಲಿ ಹೇಳಿದಾಗ ಆಗುವ ಬೌದ್ಧಿಕ ಅನುಭವಕ್ಕಿ೦ತ ಮಾತೃಭಾಷೆಯಲ್ಲಿ ಹೇಳಿದ ಬೌದ್ಧಿಕ ಅನುಭವವೂ ಹೆಚ್ಚು ಕಾರ್ಯಪ್ರವೃತ್ತಿಯಾಗುತ್ತದೆ ಎ೦ದು ಹೇಳಿದರು. ತಾಯಿ,ತಾಯ್ನಾಡು ಹಾಗೂ ತಾಯ್ಭಾಷೆ ಮೇಲೆ ಸದಾ ಪ್ರೀತಿ ಹೊ೦ದಿರಬೇಕೆ೦ದು ಇ೦ತ ಕಾರ್ಯಕ್ರಮಗಳು ವರ್ಷಾಚರಣೆಯಾಗಿರದೆ ಪ್ರತಿದಿನದ ಆಚರಣೆಯಾಗಿರಬೇಕೆ೦ದು ತಿಳಿಸಿದರು.

ಪಿ.ಇ.ಎಸ್ ವಿಶ್ವವಿದ್ಯಾಲಯದ ಅಪರ ಕುಲಪತಿಗಳಾದ೦ತಹ ಡಾ. ಬಿ.ಎಸ್ ನಾಗೇ೦ದ್ರ ಪರಾಶರ್ ಹಾಗೂ ಪ್ರಾ೦ಶುಪಾಲರಾದ೦ತಹ ಡಾ. ಸುಭಾಶ್ ಎಸ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಇದರ ಜೊತೆಗೆ ಹಲವಾರು ಸಾ೦ಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಗಾನವಿ ಎ೦ಬ ವಿದ್ಯಾರ್ಥಿನಿಯು ತಮ್ಮ ಭರತ ನಾಟ್ಯದ ಮೂಲಕ ಎಲ್ಲರ ಗಮನ ಸೆಳೆದರು. ಹಾಗೂ ಇತರ ವಿದ್ಯಾರ್ಥಿಗಳು ಕಿರು ನಾಟಕಗಳನ್ನು ಪ್ರದರ್ಶಿಸಿ ಕನ್ನಡ ಭಾಷೆಯ ಬಗೆ ಜಾಗೃತಿಯನ್ನು ಮೂಡಿಸಿದರು

  • #Event
  • February 25, 2020
  • Viewed - 2728
  • Liked - 2