ಬಿಪಿನ್ ರಾವತ್ ಅವರು ದೇಶ ಕಂಡ ಅದ್ವಿತೀಯ ಸೇನಾನಿ, ಭಾರತಾಂಬೆಯ ಮಡಿಲಲ್ಲಿ ಇಂತಹ ವೀರಯೋಧರು ಮತ್ತೊಮ್ಮೆ ಹುಟ್ಟಿಬರಲಿ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಫೊ ಎಂ ಅರ್ ದೊರೆಸ್ವಾಮಿ ಹೇಳಿದರು.
ಪಿಇಎಸ್ ಕಾಲೇಜು ಮತ್ತು ಎನ್ ಸಿ ಸಿ 2 ಕರ್ನಾಟಕ ಬೆಟಾಲಿಯನ್ ವತಿಯಿಂದ ಆಯೋಜಿಸಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾವತ್ ಅವರು ದೇಶದ ಭದ್ರತೆ ಮತ್ತು ರಕ್ಷಣೆಗೆ ಮರೆಯಲಾಗದ ಸೇವೆ ಸಲ್ಲಿಸಿದ್ದಾರೆ. ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಫೊ ಎಂ ಅರ್ ದೊರೆಸ್ವಾಮಿ, ಹನುಮಂತನಗರ ಪಿಇಎಸ್ ಕ್ಯಾಂಪಸ್ ನ ಶೈಕ್ಷಣಿಕ ನಿರ್ದೇಶಕರಾದ ಎಂ.ವಿ.ಸತ್ಯನಾರಾಯಣ, ಲೆಫ್ಟಿನೆಂಟ್ ಲೋಹಿತ್ ಹಾಗೂ ಎನ್ ಸಿ ಸಿ ಹಾಗೂ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.