Search...

ಅಪ್ಪು ನೆನಪು

ಅಪ್ಪು ನೆನಪು

ಪಿ.ಇ.ಎಸ್ ವಿಶ್ವವಿದ್ಯಾಲಯದ ಆತ್ಮತೃಷದ ಅಂಗವಾಗಿ ಕಾಲೇಜಿನ ಕನ್ನಡ ಕೂಟವು ೨೨ನೇ ಏಪ್ರಿಲ್ ೨೦೨೨,ಶುಕ್ರವಾರ "ಅಪ್ಪು ನೆನಪು" ಎಂಬ ಬಹಳ ಯಶಸ್ವಿಯಾದ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗದ ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ಸಂಗೀತ ನಮನವನ್ನು ಸಲ್ಲಿಸಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಅಪ್ಪು ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಹಾಗು ಅವರ ಹಾಡುಗಳಿಗೆ ಕುಣಿದು ಪ್ರೇಕ್ಷಕರನ್ನು ಮನರಂಜಸಿದರು. ಈ ಕಾರ್ಯಕ್ರಮವನ್ನು ನೋಡಲು ಕಾಲೇಜಿನಲ್ಲಿ ಕಿಕ್ಕಿರಿದು ನೆರದಿದ್ದ ಜನರು,ಅಪ್ಪು ಎಲ್ಲೂ ಹೋಗಿಲ್ಲ ನಮ್ಮೊಳಗೇ ಶಾಶ್ವತವಾಗಿ ಉಳಿದು ಬಿಟ್ಟಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ವಿಶ್ವವಿದ್ಯಾಲಯದ ಡೀನ್, ವಿದ್ಯಾರ್ಥಿ ವ್ಯವಹಾರಗಳು ಡಾ.ವಿ ಕೃಷ್ಣ ಅವರು ಕೊನೆಗೆ ಅತ್ಯಂತ ಜನಪ್ರಿಯ ಹಾಡಾದ 'ಬೊಂಬೆ ಹೇಳುತೈತೆ' ಹಾಡಿಗೆ ಧ್ವನಿಯಾಗುವುದರ ಮೂಲಕ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು.

  • #Event
  • April 26, 2022
  • Viewed - 1407
  • Liked - 17