Kabaddi tournament 2022 @ PESHNC
ಪಿಇಎಸ್ ಪದವಿಪೂರ್ವ ಕಾಲೇಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಸಹಯೋಗದೊಂದಿಗೆ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಭಾಟನೆಯು ದಿನಾಂಕ: 28-09-2022 ರಂದು ನಗರದ ವಿದ್ಯಾಪೀಠ ವೃತ್ತದಲ್ಲಿರುವ ಶಂಕರ್‌ನಾಗ್ ಆಟದ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಭಾಟನೆಯನ್ನು ನೆರವೇರಿಸಿದ ಬಸವನಗುಡಿ ಶಾಸಕರಾದ ಶ್ರೀ ಎಲ್.ಎ. ರವಿಸುಬ್ರಮಣ್ಯರವರು, ದೇಶಿ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿಬೆಳೆಸಬೇಕಾದ್ದು ಮಕ್ಕಳ ಜವಾಬ್ದಾರಿ. ಅಲ್ಲದೇ ಈ ಕ್ರೀಡೆಗಳು ಅವರ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡೆಗಳು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಗಿ ಶ್ರೀ ಆನಂದರಾಜ್, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಇವರು "ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲನ್ನು ಸಹಿಸಿಕೊಳ್ಳಲು ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಆ ಧೈರ್ಯವು ನಿಮ್ಮದಾಗಲಿ. ನೀವೆಲ್ಲರೂ ಕ್ರೀಡಾ ಮನೋಭಾವದಿಂದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಶ್ರೀ ಎ. ಕುಮಾರ್, ಸಂಚಾಲಕರು, ಕ್ರೀಡಾ ವಿಭಾಗ, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಪಿಇಎಸ್ ಪದವಿಪೂರ್ವ ಕಾಲೇಜಿನ ನಿರ್ದೇಶಕರಾದ ಪ್ರೊ. ಎಂ.ವಿ. ಸತ್ಯನಾರಯಣರವರು, ಪ್ರಾಂಶುಪಾಲರಾದ ಡಾ|| ಸಿ. ನಾರಾಯಣರೆಡ್ಡಿ ಇವರುಗಳು ಉಪಸ್ಥಿತರಿದ್ದರು. ದಿನಾಂಕ 29-09-2022 ರಂದು ಮಧ್ಯಾಹ್ನ ಮೂರು ಗಂಟೆಗೆ ಪಂದ್ಯಾವಳಿಯ ಸಮಾರೋಪ ಸಮಾರಂಭವು ನೆರವೇರಿತು.
ಸೇಂಟ್ ಆಂತೋನಿ ಪಿಯು ಕಾಲೇಜಿನ ಬಾಲಕರು ಮತ್ತು ಬಾಲಕಿಯರ ತಂಡಗಳು ಪಂದ್ಯಾವಳಿಯ ಪ್ರಥಮ ಸ್ಥಾನವನ್ನು ಪಡೆದು ವಿಜೇತರಾಗಿರುತ್ತಾರೆ. ಬಿಇಎಸ್ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಬಿಬಿಎಂಪಿ ಪಿಯು ಕಾಲೇಜು, ಹೆಚ್‌ಎಸ್‌ಆರ್ ಲೇಔಟ್ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.ಬಹುಮಾನ ವಿತರಣೆಯನ್ನು ಶ್ರೀ ಬಿ.ಸಿ. ರಮೆಶ್, ಭಾರತ ಕಬಡ್ಡಿ ತಂಡದ ಮಾಜಿ ನಾಯಕರು ಹಾಗೂ ಅರ್ಜುನ ಪ್ರಶಸ್ತಿ ವಿಜೇತರು ಇವರು ನೆರವೇರಿಸಿದರು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಶ್ರೀ ಎಂ.ಎಸ್. ವಿನಯ್, ಕ್ರೀಡಾ ನಿರ್ದೇಶಕರು, ಪಿಇಎಸ್ ವಿಶ್ವವಿದ್ಯಾಲಯ ಇವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀ ಎ. ಕುಮಾರ್, ಸಂಚಾಲಕರು, ಕ್ರೀಡಾ ವಿಭಾಗ, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಪಿಇಎಸ್ ಪದವಿಪೂರ್ವ ಕಾಲೇಜಿನ ನಿರ್ದೇಶಕರಾದ ಪ್ರೊ. ಎಂ.ವಿ. ಸತ್ಯನಾರಯಣರವರು, ಪ್ರಾಂಶುಪಾಲರಾದ ಡಾ| ಸಿ. ನಾರಾಯಣರೆಡ್ಡಿ ಇವರುಗಳು ಉಪಸ್ಥಿತರಿದ್ದರು.
- #Sports #StudentAchievements
- October 01, 2022
- Viewed - 1465
- Liked - 0