ಬಸವ ಚೈತನ್ಯ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ 2023 ಮತ್ತು ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ
ಬೆಂಗಳೂರಿನ ಕಸ್ತೂರಿಬಾ ಸಭಾಂಗಣದ ಗಾಂಧಿ ಭವನದಲ್ಲಿ ದಿನಾಂಕ 23.4.2023 ರಂದು, ಬಸವ ಜಯಂತಿ ಪ್ರಯುಕ್ತ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನವು ಹಮ್ಮಿಕೊಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ “ಬಸವ ಚೈತನ್ಯ” ಪ್ರಶಸ್ತಿ ಹಾಗೂ “ಸಾವಿತ್ರಿಬಾಯಿ ಫುಲೆ” ಪ್ರಶಸ್ತಿ 2023 ಮತ್ತು ಆಯ್ದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ“ವನ್ನು ನೀಡಿ ಗೌರವಿಸಲಾಯಿತು. ಪಿಇಎಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ನಂದ ಎಂ. ಎಲ್. ರವರಿಗೆ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯಮಟ್ಟದ ಸಾವಿತ್ರಿ ಬಾಯಿ ಫುಲೆ 2023 ಪ್ರಶಸ್ತಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಾದ ಬಿ. ಟಿ. ಲಲಿತ ನಾಯಕ್ ಹಾಗೂ ಇನ್ನಿತರ ಗಣ್ಯರೊಂದಿಗೆ ನೀಡಿ ಗೌರವಿಸಿದರು. ಪಿಇಎಸ್ ವಿಶ್ವವಿದ್ಯಾಲಯದ ವಿಶೇಷ ಪ್ರತಿಭೆ ಹೊಂದಿರುವ ಅಂತಿಮ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಿಶಿರ್, ಅಭಿನವ್ ಆನಂದ್, ನಿರಂಜನ್, ಅಂತಿಮ ಬಿಕಾಂ ವಿಭಾಗದಿಂದ ವರ್ಷಿತ, ಅಂತಿಮ ಬಿಬಿಎ ವಿಭಾಗದಿಂದ ನವನೀತ್, ಹಾಗೂ ಪಿಯುಸಿ ವಿಭಾಗದಿಂದ ನರೇನ್ ರವರಿಗೆ ಪ್ರಮಾಣ ಪತ್ರಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಮೂಲಕ ನೀಡಿ ಗೌರವಿಸಲಾಯಿತು.
- #StudentAchievements
- April 25, 2023
- Viewed - 1401
- Liked - 3