ಫ್ಯಾಕಲ್ಟಿ ಡೆವೆಲಪ್ಮೆಂಟ್ ಪ್ರೋಗ್ರಾಮ್ 2023 @ ಪಿಇಎಸ್ ಎಚ್ಎನ್ ಕ್ಯಾಂಪಸ್
ಶಾಲಾ ಶಿಕ್ಷಣ ಮತ್ತು ಸಾಕ್ಟರತೆ ಇಲಾಖೆಯ ಸಹಯೋಗದೊಂದಿಗೆ ಪಿಇಎಸ್ ಪದವಿಪೂರ್ವ ಕಾಲೇಜು, ಬೆಂಗಳೂರು, ಇವರು ಜೀವಶಾಸ್ತ್ರದ ಉಪನ್ಯಾಸಕರುಗಳಿಗೆ ಶೈಕ್ಟಣಿಕ ಕಾರ್ಯಾಗಾರವನ್ನು ದಿನಾಂಕ: 18-08-2023 ರಂದು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಕಾಲೇಜುಗಳಿಂದ 150ಕ್ಕೂ ಹೆಚ್ಚು ಜೀವಶಾಸ್ತ್ರ ಉಪನ್ಯಾಸಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಉಪನಿರ್ದೇಶಕರಾದ ಶ್ರೀ. ಆನಂದರಾಜ್ ರವರುದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯವನ್ನು ಸಾಸಿಮಾತ್ರವಲ್ಲದೇ ಮೌಲ್ಯಗಳನ್ನೂ ಬೋಧಿಸಬೇಕು. ತರಗತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ| ಎಂ.ಆರ್. ದೊರೆಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಉಪನ್ಯಾಸಕರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ಕಲಿಕೆಯ ಪ್ರಮಾಣ ಹೆಚ್ಚಿಸಲು ಮೆಂಟರಿಂಗ್ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು ಮತ್ತು ಉಪನ್ಯಾಸಕರು ತಾವು ಬೋಧಿಸುವ ವಿಷಯದಲ್ಲಿ ಹೊಸ ವಿಷಯಗಳನ್ನು ಗ್ರಹಿಸಿ ವಿದ್ಯಾರ್ಥಿಗಳಿಗೆ ತಲುಪಿಸಿದರೆ, ವಿದ್ಯಾರ್ಥಿಗಳ ಜ್ಞಾನವೃದ್ದಿಗೆ ಅನುವಾಗುತ್ತದೆಂದು ತಿಳಿಸಿದರು.
ಮುಂದುವರೆದು, ಗುರುವಿನ ಪದದ ಅರ್ಥವನ್ನು ಹೇಳಿದರಲ್ಲದೆ, ಗುರುವೇ ವಿದ್ಯಾ ದೇಗುಲದ ಪೂಜಾ ವಿಗ್ರಹ ಎಂದು ಹೇಳಿದರು. ಸಮಾಜದಲ್ಲಿ ಶಿಕ್ಬಕರು ಹಾಗೂ ವೈದ್ಯರು ಅತ್ಯುನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ವೈದ್ಯರು ಜೀವದಾನ ನೀಡಿದರೆ, ಶಿಕಕರು ಆ ವ್ಯಕ್ತಿಯ ಜೀವನವನ್ನೇ ರೂಪಿಸುತ್ತಾರೆ. ಶಿಕ್ಷಣ ಸಂಸ್ಥೆಯ ಹಲವಾರು ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಈಗಲೂ ಶಿಕ್ಷಕನಾಗಿ ಇರುವುದೇ ತಮಗೆ ಅತ್ಯಂತ ಹೆಮ್ಮೆಯ ಹಾಗೂ ತೃಪ್ತಿ ತರುವ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಬಯೋಫೋರಂನ ಅಧ್ಯಕ್ಷರಾದ ಶ್ರೀ. ದೇವರಾಜು ಆರ್ ಸಾ ಬು ಅಜ ಈ ಬೆಂಗಳೂರು ದಕ್ಷಿಣ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ರಾಜಗೋಪಾಲ್, ವಿಜಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ. ಟಿ. ಬಾಲಕೃಷ್ಣ ಅಡಿಗ, ಪಿಇಎಸ್ ಹನುಮಂತನಗರ ಕ್ಯಾಂಪಸ್ ನಿರ್ದೇಶಕರಾದ ಪ್ರೊ. ಎಂ.ವಿ. ಸತ್ಯನಾರಾಯಣ, ಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಿ. ನಾರಾಯಣ ರೆಡ್ಡಿ ಇವರುಗಳು ಉಪಸ್ಥಿತರಿದ್ದರು.
- #Event
- August 19, 2023
- Viewed - 1137
- Liked - 2