Prof. M R Doreswamy, Chancellor of PES University was conferred with Honorary Fellowship award by Karnataka Association for the Advancement of Science (KAAS)
ಡಾ.ವಿ.ಕೆ.ಆತ್ರೆ, ಡಾ.ಎಂ.ಆರ್.ದೊರೆಸ್ವಾಮಿ, ಎಸ್.ರುದ್ರೇಗೌಡರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ಪ್ರದಾನ.
ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ ಸಹಯೋಗದಲ್ಲಿ ವಿಜ್ಞಾನ, ತಂತ್ರಜ್ಞಾನ,ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮವಿಭೂಷಣ ಡಾ.ವಿ.ಕೆ ಆತ್ರೆ,ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಡಾ.ಎಂ.ಆರ್.ದೊರೆಸ್ವಾಮಿ ಮತ್ತು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡರವರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಗೌರವ ಫೆಲೋಶಿಪ್ ಸ್ವೀಕರಿಸಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ "ಈ ಗೌರವ,ಹೆಮ್ಮೆ ತಂದಿದೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.ಅನೇಕ ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿದ್ದು,ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ಶ್ರಮಿಸಿರುವೆ.ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಸರ್ಕಾರದ ಸಹಯೋಗದೊಂದಿಗೆ ಪಿಇಎಸ್ ವಿಶ್ವವಿದ್ಯಾಲಯದ ವತಿಯಿಂದ 1600 ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ.ಕುಲಪತಿಗಳ ಹುದ್ದೆ ಮಾರಾಟಕ್ಕಲ್ಲ,ಕುಲಪತಿಗಳ ಆಯ್ಕೆ ಮೆರಿಟ್ ಆಧಾರವಾಗಿರಬೇಕು ಎಂದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ.ಕುಲಪತಿ ಸಮರ್ಪಕವಾಗಿದ್ದರೆ ವಿಶ್ವವಿದ್ಯಾಲಯ ಗಟ್ಟಿಯಾಗಿರಲಿದೆ ಎಂದು ಪ್ರತಿಪಾದಿಸಿದೆ.ಈಗಲೂ ಪಿಇಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ,ಕೌಶಲ್ಯ ತರಭೇತಿ,ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಸುಧಾರಣೆಗಳಿಗೆ ಆದ್ಯತೆ ನೀಡಿದ್ದೇವೆ.ಎಲ್ಲಾ ಶಿಕ್ಷಣ ಸಂಸ್ಥೆಗಳು ಈ ಪ್ರಯತ್ನ ಮಾಡಬೇಕು.ಶಿಕ್ಷಣ ಕ್ಷೇತ್ರ ಬದಲಾದರೆ ರಾಷ್ಟ್ರವೇ ಬದಲಾಗಲಿದೆ.ಸಮೃದ್ದ,ಸದೃಡ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ದೊಡ್ಡದು.ಆ ಶಿಕ್ಷಕರ ಪ್ರತಿನಿಧಿಯಾಗಿ ಈ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತ್ರಿವಳಿ ರತ್ನಗಳಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ನೀಡಿರುವುದು ಗೌರವ ಮತ್ತು ಹೆಮ್ಮೆಯ ವಿಷಯ.ಈ ಮೂಲಕ ಹೊಸ ಪೀಳಿಗೆಯ ಯುವಕರು ಸ್ಪೂರ್ತಿ ಹೊಂದಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಬೇಕು.ಸಮಾಜದಲ್ಲಿನ ಸಮಸ್ಯೆ, ಕೊರತೆಗಳಿಗೆ ಪರಿಹಾರ ಒದಗಿಸುವುದೇ ವಿಜ್ಞಾನ, ತಂತ್ರಜ್ಞಾನದ ಗುರಿ.ಆ ನಿಟ್ಟಿನಲ್ಲಿ ಸಂಶೋಧನೆ, ಆವಿಷ್ಕಾರಗಳು ಹೆಚ್ಚಾಗಬೇಕು.ಆತ್ಮನಿರ್ಭರತೆಗೆ ಆದ್ಯತೆ ಹೆಚ್ಚಾಗಿದ್ದು ಸರ್ಕಾರಗಳು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಆರ್ಥಿಕ ಸಹಾಯ ಮತ್ತು ಅನುದಾನ ಹೆಚ್ಚಿಸಬೇಕು - ಕುಲಪತಿ ಡಾ.ಜಯಕರ ಎಸ್ .ಎಂ
ಕಾರ್ಯಕ್ರಮದಲ್ಲಿಕುಲಪತಿ ಡಾ.ಜಯಕರ ಎಸ್. ಎಂ, KAAS ಅಧ್ಯಕ್ಷರು ಡಾ.ಕೆ.ಸಿದ್ದಪ್ಪ,ಡಾ.ಅಶೋಕ್ ಡಿ ಹಂಜಗಿ,ಪ್ರೊ.ಬಿ.ಸಿ.ಪ್ರಭಾಕರ್,ಪ್ರೊ.ಎನ್.ನಾಗಯ್ಯ ಉಪಸ್ಥಿತರಿದ್ದರು.
- #Event #StaffAchievements
- September 13, 2024
- Viewed - 313
- Liked - 2