ಪಿಇಎಸ್ ಪಿಯು ಕಾಲೇಜ್ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ'ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು ಹಾಗೂ ಸರಿಯುತ್ತರ ' ಎಂಬ ವಿಷಯದ ಬಗ್ಗೆ
ಸ್ವಾಮಿ ವೀರೇಶಾನಂದ ಸರಸ್ವತಿ, ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು ಇಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಜೀವನ ಎಂದರೆ ಜೀವಂತಿಕೆ. ಜೀವನಕ್ಕೆ ತಯಾರಾಗುವಾಗ ಉತ್ತಮವಾದ ಮಾದರಿಯನ್ನೆ ಅನುಸರಿಸಬೇಕು . ಸಮಯವು ಎಲ್ಲರಿಗೂ ಸಮಾನವಾಗಿ ದೊರೆತಿರುವ ಒಂದು ಅಮೂಲ್ಯ ಶಕ್ತಿ .ಎಚ್ಚರಿಕೆ ಇಲ್ಲದಿದ್ದರೆ ಮನುಷ್ಯ ದಾರಿ ತಪ್ಪುತ್ತಾನೆ. ಸಾಮಾನ್ಯ ಮತ್ತು ಅಸಾಮಾನ್ಯರ ಮಧ್ಯೆ ಒಂದೇ ವ್ಯತ್ಯಾಸ. ಅದು 'ಅ' ಎನ್ನುವ ಅಕ್ಷರ ಮಾತ್ರ. ಈ ಅಕ್ಷರದ ಮಹತ್ವವು ಅವರ ಹೋರಾಟದ ಹಾದಿಯನ್ನು ಮತ್ತು ಪರಿಶ್ರಮವನ್ನು ಸೂಚಿಸುತ್ತದೆ. ನಮ್ಮ ಜೀವನವೆಂಬ ಪ್ರಯಾಣದಲ್ಲಿ ವಿದ್ಯಾರ್ಥಿಜೀವನವು ಎಂಜಿನ್ ಇದ್ದಂತೆ.ಪ್ರಪಂಚದಲ್ಲಿ ಎರಡು ರೀತಿಯ ಜನರು ಇರುತ್ತಾರೆ. ಆಸೆಗಳನ್ನು ಮಾತ್ರ ಇಟ್ಟುಕೊಂಡವರು ಹಾಗೂ ಆ ಆಸೆಕನಸುಗಳನ್ನು ನನಸು ಮಾಡಲು ಪ್ರಯತ್ನಿಸುವವರು. ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸೋಲಿಗೆ ಹೆದರಬಾರದು ಅಲ್ಲದೆ ಗೆಲುವಿಗೆ ತಲೆ ತಿರುಗಿ ಬೀಳಬಾರದು ಎಂದು ಹೇಳಿದರು.
ಈಕಾರ್ಯಕ್ರಮದಅಧ್ಯಕ್ಷತೆಯನ್ನುವಹಿಸಿದ್ದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾII ಎಂ. ಆರ್. ದೊರೆಸ್ವಾಮಿಯವರು ಸ್ವಾಮಿ ವಿವೇಕಾನಂದರಿಂದ ಸ್ವತಃ ಪ್ರಭಾವಿತರಾಗಿದ್ದಾಗಿ ಹೇಳಿದರು. ಭಗವಂತನ ಸೃಷ್ಟಿಯಲ್ಲಿ ಮನುಷ್ಯ ಜನ್ಮವೇ ಸರ್ವಶ್ರೇಷ್ಠ. ಅದನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರ್ಯರಂಗದಲ್ಲಿ ಮುಂದೆ ಕೆಲಸ ಮಾಡಿದರೂ ಅದರಲ್ಲಿ ಉತ್ಕೃಷ್ಟಸ್ಥಾನಕ್ಕೆ ಏರಲು ಆಕಾಂಕ್ಷೆ ಹೊಂದಿರಬೇಕು. ಶಿಕ್ಷಣವೆಂದರೆ ರಾಷ್ಟ್ರವನ್ನು ಕಟ್ಟುವ ಕೆಲಸ . ಅದರಲ್ಲಿ ಯಾವುದೇ ರೀತಿಯ ರಾಜಿಯ ಅವಶ್ಯಕತೆ ಇಲ್ಲ. ಅತ್ಯುತ್ತಮ ಸಾಧನೆಗೆ ಗುರಿ ಹಾಗೂ ಪರಿಶ್ರಮಗಳೇ ಸಾಧನಗಳಾಗಿರಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವವಿದ್ಯಾನಿಲಯದ ಹೆಚ್.ಎನ್ ಕ್ಯಾಂಪಸ್ ನ ಅಧ್ಯಕ್ಷರಾದ ಪ್ರೊ||ಎಂ.ವಿ.ಸತ್ಯನಾರಾಯಣರವರು ಹಾಗೂ ಪಿಇಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾIIಸಿ.ನಾರಾಯಣ ರೆಡ್ಡಿಯವರು ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
View Album
- #Event #InTheMedia
- October 29, 2024
- Viewed - 548
- Liked - 2