Search...

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ - 2022

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ - 2022

ಪಿಇಎಸ್ ವಿಶ್ವವಿದ್ಯಾಲಯದ ಕನ್ನಡ ಕೂಟವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಪುಳಕಗೊಳಿಸಿದವು. ವಿಶ್ವವಿದ್ಯಾನಿಲಯದ ಸಂಗೀತ ತಂಡವು ರಾಷ್ಟ್ರಕವಿ ಕುವೆಂಪುರವರ “ಬಾರಿಸು ಕನ್ನಡದ ಡಿಂಡಿಮವ” ಗೀತೆಯನ್ನು ಮರುಸೃಷ್ಟಿಸಿತು. ಮನಮೋಹಕ ಡೊಳ್ಳು ಕುಣಿತ ಪ್ರದರ್ಶನವು ನೆರೆದಿದ್ದವರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ವಿಶ್ವವಿದ್ಯಾನಿಲಯದ ಸಂಸ್ಕೃತಿ ತಂಡವು ವರಾಹ ರೂಪಂ ಗೀತೆಯ ಶಾಸ್ತ್ರೀಯ ನೃತ್ಯ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದರು. ಶ್ರೀ ವಸಿಷ್ಠ ಸಿಂಹ ಅವರು ರಾಜ್ಯೋತ್ಸವದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು ಹಾಗೂ ತಮ್ಮ ಕೆಲವು ಸಾಂಪ್ರದಾಯಿಕ ಸಂಭಾಷಣೆಗಳನ್ನು ಮತ್ತು ಗೀತೆಗಳನ್ನು ಹಾಡಿದರು. ವಿಶ್ವವಿದ್ಯಾನಿಲಯದ ಸಂಗೀತ ತಂಡವು ಸುಮಧುರ ಚಲನಚಿತ್ರ ಗೀತೆಗಳನ್ನು ಒಳಗೊಂಡ "ಸ್ಯಾಂಡಲ್‌ವುಡ್ ಸ್ವರಗಳು"ನ್ನು ಪ್ರಸ್ತುತಪಡಿಸಿತು. ನೃತ್ಯ, ಯಕ್ಷಗಾನ ಪ್ರದರ್ಶನ ಮತ್ತು ಹಾಸ್ಯ ನಟನೆಯ ಮೂಲಕ ನಟ ಶ್ರೀ ನಿತಿನ್ ಕಾಮತ್ ಕಾರ್ಯಕ್ರಮಕ್ಕೆ ಹೆಚ್ಚಿನ ಮನರಂಜನೆ ನೀಡಿದರು. ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಸೂರ್ಯ ಪ್ರಸಾದ್, ಕುಲಸಚಿವರಾದ ಡಾ.ಕೆ.ಎಸ್.ಶ್ರೀಧರ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ವಿ.ಕೃಷ್ಣ, ಇಂಜಿನಿಯರಿಂಗ್ ವಿಭಾಗದ ಡೀನ್ ಡಾ.ಬಿ.ಕೆ.ಕೇಶವನ್. ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಧ್ಯಕ್ಷೆ ಡಾ.ಎಸ್.ಎಸ್.ಶೈಲಜಾರವರೆಲ್ಲರು ಸೇರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿ ಸಮಾರಂಭದ ಕೊನೆಯವರೆಗೆ ಉಪಸ್ಥಿತರಿದ್ದರು.

  • #Event
  • November 21, 2022
  • Viewed - 1355
  • Liked - 74