Back to PES.edu PES.edu
Home
Admissions
Home / PESU RR Campus / PES University student won HAL Aerothon 2026 @ IIT Indore

PES University student won HAL Aerothon 2026 @ IIT Indore

PES University student Gaurav S, won first place in the Grand finale of national level HAL Aerothon 2026 held at IIT Indore on August 7th and 8th 2026. …

PU
PES University Media Cell
August 10, 2026
25 views
likes
PES University student won HAL Aerothon 2026 @ IIT Indore

PES University student Gaurav S, won first place in the Grand finale of national level HAL Aerothon 2026 held at IIT Indore on August 7th and 8th 2026. Gaurav shared the prize with other two girls, Keerthana Bhat of NMIT Shraddha R K of MSRUAS, under team 'Mavericks' with their outstanding project "Hybrid UAV Propulsion System".

2314 teams participated in this competition from across the country, including IIT's like IIT Bombay, Dhanbad, Ropar, Tirupati, Dharwad and NIT's like Surathkal and UPES Dehradun. Team Mavericks led by Gaurav, emerging as the winning team from such a competitive national field, deserves the appreciation.

“This remarkable achievement reflects the strong academic foundation and our continued emphasis on cutting-edge domains such as artificial intelligencem and machine learning at PES University. It reinforces our commitment to fostering innovation and nurturing globally competitive talent,” said Prof. Jawahar Doreswamy, Chancellor, PES University.

“I extend my heartfelt congratulations to Gaurav S on this outstanding accomplishment. We are immensely proud of his achievement and wish him continued success in all his future endeavors,” he added.

ಹೆಚ್ಎಎಲ್ ಏರೋಥನ್ 2026ರಲ್ಲಿ ಪಿಇಎಸ್ ವಿವಿ ವಿದ್ಯಾರ್ಥಿ ಪ್ರಥಮ

ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗೌರವ್ ಎಸ್. ಅವರು, 2026ರ ಆಗಸ್ಟ್ 7 ಮತ್ತು 8 ರಂದು IIT ಇಂದೋರ್ನಲ್ಲಿ ನಡೆದ ರಾಷ್ಟ್ರಮಟ್ಟದ 'ಹೆಚ್ಎಎಲ್ ಏರೋಥನ್ 2026'ರ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. "ಮೇವರಿಕ್ಸ್" (Mavericks) ತಂಡದ ಭಾಗವಾಗಿದ್ದ ಇವರು, ಏನ್ಎಂಐಟಿ ಯ ಕೀರ್ತನಾ ಭಟ್ ಮತ್ತು ಎಂ ಎಸ್ ರಾಮಯ್ಯ ವಿವಿಯ ಶ್ರದ್ಧಾ ಆರ್ ಕೆ ಅವರೊಂದಿಗೆ ಸೇರಿ, "ಹೈಬ್ರಿಡ್ ಮಾನವ ರಹಿತ ವೈಮಾನಿಕ ವಾಹನ" (Hybrid UAV Propulsion System) ಎಂಬ ಅತ್ಯುತ್ತಮ ಯೋಜನೆಯ ಮೂಲಕ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ದೇಶಾದ್ಯಂತ 2600 ತಂಡಗಳು ಭಾಗವಹಿಸಿದ್ದವು, ಅವುಗಳಲ್ಲಿ ಐಐಟಿಗಳಾದ ಐಐಟಿ ಬಾಂಬೆ, ಧನ್ಬಾದ್, ರೋಪರ್, ತಿರುಪತಿ, ಧಾರವಾಡ ಮತ್ತು ಎನ್ಐಟಿ ಸುರತ್ಕಲ್ ಮತ್ತು ಯುಪಿಇಎಸ್ ಡೆಹ್ರಾಡೂನ್ ಸೇರಿವೆ. ಅತ್ಯಂತ ಪೈಪೋಟಿಯಿಂದ ಕೂಡಿದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿರುವ, ಗೌರವ್ ನೇತೃತ್ವದ 'ಟೀಮ್ ಮೇವರಿಕ್ಸ್&' ನ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ.

“ಈ ಗಮನಾರ್ಹ ಸಾಧನೆಯು ಬಲವಾದ ಶೈಕ್ಷಣಿಕ ಅಡಿಪಾಯ ಮತ್ತು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ಅತ್ಯಾಧುನಿಕ ಡೊಮೇನ್ಗಳ ಮೇಲೆ ನಮ್ಮ ನಿರಂತರ ಒತ್ತು ನೀಡುವಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ನಾವೀನ್ಯತೆಯನ್ನು ಬೆಳೆಸುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರತಿಭೆಯನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ”ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪ್ರೊ. ಜವಾಹರ್ ದೊರೆಸ್ವಾಮಿ ಹೇಳಿದರು.

"ಗೌರವ್ ಎಸ್. ಅವರ ಈ ಅತ್ಯುತ್ತಮ ಸಾಧನೆಗಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಈ ಸಾಧನೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಮತ್ತು ಅವರ ಮುಂದಿನ ಎಲ್ಲಾ ಪ್ರಯತ್ನಗಳಲ್ಲೂ ಅವರಿಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ," ಎಂದು ಅವರು ಹೇಳಿದರು.